Thursday, 6 April 2017

ಪ್ರಯಾಣದಲ್ಲಿ ವಾಂತಿ ಆಗಬಾರದೆಂದರೆ ಈ ಚಿಕ್ಕ ಸಲಹೆಗಳನ್ನು ಪಾಲಿಸಿ..


ಬಹಳಷ್ಟು ಮಂದಿಗೆ ಬಸ್ ಪ್ರಯಾಣ ಅಂದ್ರೆ ಆಗಲ್ಲ.. ಬಸ್ ನಲ್ಲಿ ಪ್ರಯಾಣಿಸುವಾಗ ವಾಂತಿ ಬರುವಂತಾಗುವುದು, ಹೊಟ್ಟೆ ತೊಳೆಸಿದ ಅನುಭವ ಆಗುತ್ತದೆ. ಇದರಿಂದ ವಾಂತಿಯೂ ಆಗುತ್ತದೆ. ಹೆಚ್ಚಾಗಿ ತಿರುಪತಿಯಂತಹ ಬೆಟ್ಟ ಹತ್ತುವಾಗ, ಶಿರಾಡಿ ಘಾಟ್ ನಂತಹ ರಸ್ತೆಗಳಲ್ಲಿ ಸಂಚರಿಸುವಾಗ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಈ ರೀತಿ ಬಹಳಷ್ಟು ಮಂದಿಗೆ ಪ್ರಯಾಣದಲ್ಲಿ ವಾಂತಿ ಆಗುತ್ತಿರುತ್ತದೆ. ಅಂತಹವರು ಪ್ರಯಾಣಕ್ಕೆ ಮುನ್ನ ಕೆಲವೊಂದು ಸೂಚನೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬೀಳಬಹುದು…

  • ಸಣ್ಣ ಶುಂಠಿ ಚೂರನ್ನು ದವಡೆಯಲ್ಲಿಟ್ಟುಕೊಂಡರೆ ವಾಂತಿಯಾಗುವ ಅವಕಾಶ ಕಡಿಮೆಯಾಗುತ್ತದೆ. ಶುಂಠಿಯಲ್ಲಿನ ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಮೆಗ್ನಿಷಿಯಂ, ಕಾಪರ್, ಜಿಂಕ್ ನಂತಹವು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು.
  • ಅಡಿಕೆ ಚೂರನ್ನು ಚಪ್ಪರಿಸಿದರು ಈ ಸಮಸ್ಯೆಯಿಂದ ಪಾರಾಗಬಹುದು.
  • ನಿಂಬೆಹಣ್ಣನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆಯನ್ನು ಆಘ್ರಾಣಿಸುತ್ತಿದ್ದರೂ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
  • ಲವಂಗ, ಸೋಂಪನ್ನು ದವಡೆಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರು ವಾಮಿಟಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ…
  • ಮುಖ್ಯವಾಗಿ ಬಸ್ ನಲ್ಲಾಗಲಿ, ಕಾರಿನಲ್ಲಾಗಲಿ ಪ್ರಯಾಣಿಸುವಾಗ ಮುಂದಿನ ಸೀಟ್ ನಲ್ಲಿ ಕುಳಿತು ನಮ್ಮ ದೃಷ್ಟಿಯನ್ನು ನೇರವಾಗಿ ನೋಡಿದರು ವಾಮಿಟಿಂಗ್ ಸೆನ್ಸೇಷನ್ ನಿಂದ ತಪ್ಪಿಸಿಕೊಳ್ಳಬಹುದು.

No comments:

Post a Comment