Friday, 21 April 2017

ಕರಿಮಣಿ

ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?
ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ.
ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.
ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ - ಅದರಲ್ಲಿ ‘ಮಾಂಗಲ್ಯ’ ಯಾವುದು? ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು? ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ? ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.
ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ. ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ. ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಲ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ. ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.
ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.
ಮಂಗಲ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ. ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ/ ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ - ಹೀಗೆ ವೈವಿಧ್ಯಗಳು. ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ.
ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ. ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.
ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.
ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:
ಮೇಷ ರಾಶಿಗೆ- 21 ಮಣಿಗಳು.
ವೃಷಭ ರಾಶಿಗೆ- 40 ಮಣಿಗಳು.
ಮಿಥುನ ರಾಶಿಗೆ- 34 ಮಣಿಗಳು.
ಕಟಕ ರಾಶಿಗೆ- 20 ಮಣಿಗಳು.
ಸಿಂಹ ರಾಶಿಗೆ- 18 ಮಣಿಗಳು.
ಕನ್ಯಾ ರಾಶಿಗೆ- 34 ಮಣಿಗಳು.
ತುಲಾ ರಾಶಿಗೆ- 40 ಮಣಿಗಳು.
ವೃಶ್ಚಿಕ ರಾಶಿಗೆ- 21 ಮಣಿಗಳು.
ಧನುಸ್ಸು ರಾಶಿಗೆ- 32 ಮಣಿಗಳು.
ಮಕರ ರಾಶಿಗೆ- 38 ಮಣಿಗಳು.
ಕುಂಭ ರಾಶಿಗೆ- 38 ಮಣಿಗಳು.
ಮೀನ ರಾಶಿಗೆ- 32 ಮಣಿಗಳು.

ಯೋಗ ಆಚಾರ್ಯ

Saturday, 15 April 2017

*SAI VILYATRAI CHARITABLE POLYCLINIC,*

"Kambar Darbar "
Shantilal Modi Road,
Opp:Bhurabbhai Hall Kandivali()W), MUMBAI.
*T: 6581 1644 / 2865 9615*
*www.kambardarbar.org*

   *DAY     TIME     CHGES*
1.  OPD     Daily    Rs. 1/- 0nly
_11-30 am & 4-30 pm_

2.  X-Ray    Daily    Rs. 100.00
_8-30 am to 5-30 pm_  

3.  ECG      Daily      Rs. 70.00
_9.00 am to 11.00 am_  

4. Pathology  Daily  Rs. 20.00 CBC/Reduced charges
_8.00 am to 12.00 noon_

5.  Eye Checkup Daily Rs.  20.00
_3.30 pm_                        

Cataract Operation / Saturday only.
Free in Indian Lenses for deserving patients

6. Gynecology   Tue/Thur/Fri     _9.00 am_          Rs.  20.00

7. Skin Spl.  Mon    Rs.  20.00
_3.30 pm_

8.  Orthopedic Mon Rs 20.00
_3.30 pm_

9.  Diabetic & Cardio Wed Rs.  20.00
_4.30 pm_                          

10. Child Spl.  Fri   Rs. 20.00
_5.30 pm_                        

11. Ear / Nose / Throat     Wed / Friday     Rs. 20.00
_3.30 pm_

12. Dental  Daily  Nominal Charges
_9.00 am to 1.00 pm_
_2.00 pm to 5.00 pm_

13. Dialysis  Daily Free deserving Patients          _7.00 am to  4.00 pm_ 
( Phone: 28067645 )                OR nominal charges

14. Utters Cancer  Test 

15. Anti Cancer Injection for Girls  aged 14 yrs to 24 yrs.     

16. Hearing Aids for Sr. Citizens @ 40% of the actual cost. Free for deserving children by Birth.

17. Note books and other staionery itemsto all students on discounted rates during summer vacation school

18. Scholarship for Higher Education for deserving candidates. visit www.kambardarbar.org

Kindly contact for further information on above contact nos.
*NO NEED OF ANY BODY'S RECOMMENDATIONS.*

Friday, 7 April 2017

ನಿಮ್ಮ ಪರಿಚಿತರಿಗೆ ತಿಳಿಸಿ.

ಪಿ. ಯು. ಸಿ ಪಾಸ್ ಮಾಡಿರುವ ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ ಡಿ. ಇಡಿ ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 4000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರರೆ ಸಾಕು. ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.

ಕಾಲೇಜು ವಿಳಾಸ:
ಶ್ರೀ ಬಸವೇಶ್ವರ ಶಿಕ್ಷಕ ತರಬೇತಿ ಕೇಂದ್ರ,
ಸಿದ್ಧಗಂಗಾ ಮಠ ತುಮಕೂರು

ನಿಮ್ಮ ಪರಿಚಿತರಿಗೆ ತಿಳಿಸಿ. 

ಹೆಚ್ಚಿನ ಮಾಹಿತಿಗಾಗಿ, 
ಜಗದೀಶ. ಬ. ಮೇತ್ರಿ
9986379937
7899699939 

Thursday, 6 April 2017

ರಕ್ತದಾನ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಇಲ್ಲಿವೆ…


ಎಲ್ಲಾ ದಾನಕ್ಕಿಂತ ಅನ್ನದಾನ ಶ್ರೇಷ್ಠ ಎಂಬುದು ಹಳೆಯ ಮಾತು. ಇಂದಿನ ಪರಿಸ್ಥಿತಿಯಲ್ಲಿ ರಕ್ತದಾನಕ್ಕಿಂತ ದೊಡ್ಡ ದಾನ ಮತ್ತೊಂದು ಇಲ್ಲ ಎಂದು ಹೇಳಬಹುದು. ಅನ್ನ ಬೇಕಾದರೆ ಯಾರಾದರೂ ನೀಡುತ್ತಾರೆ. ಆದರೆ ರಕ್ತ ನೀಡಲು ಯಾರೂ ಮುಂದೆ ಬರುವುದಿಲ್ಲ. ಕಾರಣ ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳುವಳಿಕೆಗಳೇ ಹೆಚ್ಚು. ಅಂತಹ ತಪ್ಪು ಕಲ್ಪನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

  • ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು, ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ. ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ.
  • ರಕ್ತದಾನದಿಂದ ಏಡ್ಸ್ ಸೊಂಕು ತಗಲುತ್ತದೆ ಎಂಬ ಭಯ ಕೆಲವರಲ್ಲಿ. ಇಲ್ಲಿ ರಕ್ತದಾನದಿಂದ ಅಲ್ಲ ಸೂಜಿಯನ್ನು ಹೊಸದು ಬಳಸದೇ ಇದ್ದರೆ ಸೊಂಕು ಬರಬಹುದು. ಇಂದು ಬಹಳಷ್ಟು ಕಡೆ ಹೊಸ ಸೂಜಿಗಳನ್ನು ಬಳಸುತ್ತಾರೆ.
  • ಮಹಿಳೆಯರು ರಕ್ತದಾನ ಮಾಡಬಾರದು ಎಂದು ಹೇಳುತ್ತಾರೆ. ಪೀರಿಯಡ್ಸ್ ಸಮಯದಲ್ಲಿ ರಕ್ತವನ್ನು ಕಳೆದುಕೊಳ್ಳುತ್ತಾರೆ. ರಕ್ತಹೀನತೆ ಸಮಸ್ಯೆ ಇಲ್ಲದ, ಆರೋಗ್ಯವಂತ ಯಾವ ಮಹಿಳೆ ಬೇಕಾದರೂ ರಕ್ತದಾನ ಮಾಡಬಹುದು.
  • 40 ವರ್ಷದ ನಂತರ ರಕ್ತದಾನ ಮಾಡಬಾರದು ಎಂದು ಕೆಲವರ ನಂಬಿಕೆ. ಆದರೆ ಅರವತ್ತು ವರ್ಷದವರಗೂ ಅರೋಗ್ಯವಾಗಿರುವ ಯಾರೋ ಆದರೂ ತಮ್ಮ ರಕ್ತವನ್ನು ದಾನ ಮಾಡಬಹುದು.
  • ರಕ್ತದಾನ ಮಾಡಿದರೆ ತುಂಬಾ ನೋವಾಗುತ್ತದೆ. ಎಂದು ಭಯ ಪಡುತ್ತಾರೆ. ಆದರೆ ಯಾವುದೇ ಭಯ ಪಡಬೇಕಾಗಿಲ್ಲ. ಸ್ವಲ್ಪ ಸಮಯದ ವಿಶ್ರಾಂತಿ ಪಡೆದರೆ ಸಾಕು.
  • ರಕ್ತದಾನ ಮಾಡಿದರೆ ದೇಹದಲ್ಲಿನ ರಕ್ತ ಕಡಿಮೆಯಾಗುತ್ತದೆ ಎಂಬುದು ತುಂಬಾ ಜನರ ಭಾವನೆ. ಆದರೆ 48 ಗಂಟೆಗಳಲ್ಲಿ ಮತ್ತೆ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನದಿಂದ ದೇಹದಲ್ಲಿ ಹಳೆಯ ರಕ್ತ ಹೋಗಿ ಹೊಸ ರಕ್ತ ಉತ್ಪಾದನೆಯಾಗುತ್ತದೆ.
  • ವರ್ಷಕ್ಕೆ ಒಂದು ಬಾರಿ ಮಾತ್ರ ರಕ್ತದಾನ ಮಾಡಬೇಕು ಎಂಬುದು ಕೆಲವರ ವಾದ. ಆದರೆ ಆರೋಗ್ಯವಂತ ಪುರುಷರು 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
  • 18ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು. ವ್ಯಕ್ತಿಯ ತೂಕ 45 ಕಿ.ಗ್ರಾಂ. ಗಿಂತ ಹೆಚ್ಚಿರುವವರು ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು ರಕ್ತದಾನಕ್ಕೆ ಅರ್ಹರು.
ರಕ್ತದಾನದಿಂದ ರಕ್ತದ ಅವಶ್ಯಕತೆಯಿರುವವರಿಗೆ ಮಾತ್ರ ಲಾಭವಾಗುವುದಿಲ್ಲ ಜೊತೆಗೆ ರಕ್ತದಾನಿಗಳೂ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳ ಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ. ಹೃದಯಾಘಾತದ ಸಂಭವ ಕಡಿಮೆ ಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ ಮತ್ತು ಆತ ಇನ್ನಷ್ಟು ಆರೋಗ್ಯ ವಂತನಾಗಿರಲು ಸಾಧ್ಯವಾಗುತ್ತದೆ. ಹಾಗಾಗಿ ರಕ್ತದಾನ ಮಾಡಿ ಆರೋಗ್ಯವಂತರಾಗಿ…

ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಬೇಯಿಸಿಕೊಂಡು ಕುಡಿದರೆ ಏನಾಗುತ್ತದೆ ಗೊತ್ತಾ?


ಬೆಳ್ಳುಳ್ಳಿಯನ್ನು ನಾವು ನಿತ್ಯ ಆಹಾರದಲ್ಲಿ ಬಳಸುತ್ತೇವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿ ವೈರಲ್, ಆಂಟಿ ಫಂಗಲ್ ಗುಣಗಳ ಜತೆಗೆ ಇನ್ನೂ ನಮ್ಮ ದೇಹಕ್ಕೆ ಪ್ರಯೋಜವಾಗುವ ಅನೇಕ ಔಷಧಿ ಗುಣಗಳಿವೆ. ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಜಜ್ಜಿ ಹಾಲಿನಲ್ಲಿ ಹಾಕಿ ಕಾಯಿಸಿ ಕುಡಿದರೆ? ಏನಾಗುತ್ತದೆ ಅಂತ ನಿಮಗೆ ಗೊತ್ತಾ? ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವು ಏನು ಎಂದು ಈಗ ತಿಳಿದುಕೊಳ್ಳೋಣ.

1. ಹಾಲಿನಲ್ಲಿ ಬೆಳ್ಳಿಳ್ಳಿ ಎಸಳನ್ನು ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭಿಸುತ್ತವೆ. ಫ್ಲೇವನಾಡ್ಸ್, ಎಂಜೈಮ್‌ಗಳು, ಆಂಟಿ ಆಕ್ಸಿಡೆಂಟ್‌ಗಳು, ಮಿನರಲ್‌ಗಳು, ವಿಟಮಿನ್‌ಗಳು ಲಭ್ಯವಾಗುತ್ತವೆ. ವಿಟಮಿನ್ ಎ, ಬಿ1, ಬಿ2, ಬಿ6, ಸಿ ವಿಟಮಿನ್, ಪೊಟ್ಯಾಷಿಯಂ, ಪ್ರೋಟೀನ್, ಕಾಪರ್, ಮ್ಯಾಂಗನೀಸ್, ಫಾಸ್ಪರಸ್, ಜಿಂಕ್, ಸೆಲೇನಿಯಂ, ಕ್ಯಾಲ್ಸಿಯಂನಂತಹ ಅನೇಕ ಪೋಷಕಾಂಶಗಳು ಈ ಮಿಶ್ರಣದ ಮೂಲಕ ನಮಗೆ ದೊರೆಯುತ್ತವೆ.
2. ಜ್ವರ ಕಾರಣ ಪ್ಲೇಟ್‍ಲೆಟ್‌ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್‍ಲೆಟ್‌ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ.
3. ಕೆಟ್ಟ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ. ಒಳ್ಳೆಯ ಕೊಲೆಸ್ಟಾರಾಲ್ ಹೆಚ್ಚಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ. ಅದೇನು ಇಲ್ಲದವರಿಗೆ ಭವಿಷ್ಯದಲ್ಲಿ ಬರುವುದಿಲ್ಲ.
4. ಹಲವು ವಿಧದ ಕ್ಯಾನ್ಸರ್‌ಗಳನ್ನು ಗುಣಪಡಿಸುವ ಶಕ್ತಿ ಈ ಮಿಶ್ರಣಕ್ಕಿದೆ. ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ಲಭ್ಯವಾಗುವ ಕಾಅಣ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಕ್ಯಾನ್ಸರ್ ಕಣಗಳ ವೃದ್ಧಿ ಕಡಿಮೆಯಾಗುತ್ತದೆ.
5. ವಯಸ್ಸು ಹೆಚ್ಚಾದಂತೆ ಕಾಣಿಸಿಕೊಳ್ಳುವ ವೃದ್ದಾಪ್ಯ ಕುರುಹುಗಳು ಬರುವುದಿಲ್ಲ. ಆಂಟಿ ಏಜಿಂಗ್ ಲಕ್ಷಣಗಳು ಧಾರಾಳವಾಗಿ ಇರುವ ಕಾರಣ, ಯೌವ್ವನವಾಗಿ ಕಾಣಿಸುತ್ತಾರೆ.
6. ರಕ್ತದೊತ್ತಡ, ಮಧುಮೇಹ ಹಿಡಿತದಲ್ಲಿರುತ್ತದೆ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ಲಿವರ್ ಶುದ್ಧವಾಗುತ್ತದೆ.
7. ಗಾಯಗಳಾಗಿರುವವರು ಈ ಮಿಶ್ರಣವನ್ನು ಕುಡಿದರೆ ಅವು ಶೀಘ್ರದಲ್ಲಿ ಗುಣಮುಖವಾಗುವ ಸಾಧ್ಯತೆಗಳಿವೆ. ಏಕೆಂದರೆ ಈ ಮಿಶ್ರಣದಲ್ಲಿ ಎರಡು ಪಟ್ಟು ಆಂಟಿ ಬಯೋಟಿಕ್ ಲಕ್ಷಣಗಳಿರುತ್ತವೆ.
8. ರಕ್ತ ಗಡ್ಡೆ ಕಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.
9. ಚಯಾಪಚಯ ಪ್ರಕ್ರಿಯೆ ಚುರುಕಾಗುತ್ತದೆ. ಅಧಿಕ ತೂಕ ಇರುವವರಿಗೆ ತೂಕ ಕಡಿಮೆಯಾಗುತ್ತಾರೆ.
10. ಕೆಮ್ಮು, ಜ್ವರದಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಗುಣವಾಗುತ್ತವೆ. ದಂತ ಸಂಬಂಧಿ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ.
11. ಚರ್ಮಕ್ಕೆ ಆಗಿರುವ ಫಂಗಸ್ ಇನ್‌ಫೆಕ್ಷನ್ ಗುಣವಾಗುತ್ತದೆ. ಚರ್ಮ ಸೌಂದರ್ಯ ಉತ್ತಮಗೊಳ್ಳುತ್ತದೆ. ಮೊಡವೆಗಳು ಬರುವುದಿಲ್ಲ.
12. ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದವರಿಗೆ ಈ ಮಿಶ್ರಣ ಕುಡಿಸಿದರೆ ಅವು ಕೂಡಿಕೊಳ್ಳುವ ಅವಕಾಶ ಇದೆ.

ವಾರಕ್ಕೆ 2 ಬಾರಿ ಮೀನು ತಿಂದರೆ ಏನಾಗುತ್ತದೆ ಗೊತ್ತಾ..? ಲಂಡನ್ ವೈದ್ಯರು ತಿಳಿಸಿದ ಅದ್ಭುತ ರಹಸ್ಯ…!


ವಾರಕ್ಕೆ ಕನಿಷ್ಟ 2 ಬಾರಿ ಮೀನನ್ನು ತಿಂದರೆ ಏನಾಗಬಹುದು? ಲಂಡನ್ ವೈದ್ಯರು ಹೇಳಿದ ಆ ರಹಸ್ಯವನ್ನು ನೀವು ತಿಳಿದುಕೊಳ್ಳಲೇಬೇಕು. ಹೌದು… ಇಂದಿನ ಪ್ರಪಂಚದಲ್ಲಿ ಕಾಡುತ್ತಿರುವ ಕಾಯಿಲೆಗಳಲ್ಲಿ ಶುಗರ್ ಒಂದು. ಇಡೀ ಪ್ರಪಂಚದಲ್ಲಿ ಕೋಟ್ಯಾಂತರ ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ 2 ವಿಧಗಳಿವೆ. ಒಂದು ಟೈಪ್-1, ಇನ್ನೊಂದು ಟೈಪ್-2 . ಕ್ಲೋಮ ಗ್ರಂಥಿ ಕೆಲಸ ಮಾಡದಿದ್ದರೆ ಟೈಟಪ್-1, ಕೆಲಸ ಮಾಡುತ್ತಿರುವುದರಿಂದ ಬಿಡುಗಡೆಯಾಗುವ ಇನ್ಸುಲಿನ್ ಅನ್ನು ಶರೀರವು ಸರಿಯಾಗಿ ತೆಗೆದುಕೊಳ್ಳದಿದ್ದರೆ ಆಗ ಟೈಟಪ್ -2 ಮಧುಮೇಹ ಬರುತ್ತದೆ. ಆದರೆ ಯಾವುದು ಬಂದರೂ ಆಯಾ ವ್ಯಕ್ತಿಯ ಶರೀರದಲ್ಲಿ ಗ್ಲೂಕೋಸ್ ರಕ್ತದಲ್ಲಿರಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿಯೇ ಇರುತ್ತದೆ. ಹೀಗೆ ಈ ಕಾಯಿಲೆ ಶರೀರದಲ್ಲಿ ಅನೇಕ ಭಾಗಗಳನ್ನು ಕೆಲಸ ಮಾಡದಂತೆ ಮಾಡುತ್ತದೆ. ಜೊತೆಗೆ ಇದು ಮಧುಮೇಹ ಔಷಧಿಗಳಿಗೆ ಗುಣ ವಾಗುವುದಿಲ್ಲ. ನಿಯಂತ್ರಣದಿಂದಲೇ ಇದನ್ನು ಕಡಿಮೆ ಮಾಡಬಹುದು. ಆದರೆ ಎಷ್ಟೋ ತರಹದ ಡಯಾಬಿಟಿಕ್ ಔಷಧಿಗಳು ಆಯಾ ವೈದ್ಯ ವಿಧಾನದಲ್ಲಿ ನಮಗೆ ಸಿಕ್ಕುತ್ತಿದ್ದರು ವಾರಕ್ಕೆ 2 ಬಾರಿ ಮೀನು ತಿಂದರೆ ಸಾಕು ಡಯಾಬಿಟಿಸ್ ಸಮಸ್ಯೆಗೆ ಗುಡ್ ಬೈ ಎನ್ನಬಹುದು. ಹೌದು ನೀವು ಕೇಳಿದ್ದು ನಿಜ..!
ಇದನ್ನು ಹೇಳಿದ್ದು ಯಾರೂ ಅಲ್ಲ ಸಾಕ್ಷಾತ್ ಲಂಡನ್ ವೈದ್ಯರು. ಮಧುಮೇಹ ಕಾರಣದಿಂದ ಅನೇಕ ಅನಾರೋಗ್ಯದ ಸಮಸ್ಯೆಗಳು ಬರುತ್ತವೆಂದು ಗೊತ್ತು. ರೋಗಗಳಲ್ಲದೆ ಕಣ್ಣಿನ ದೃಷ್ಟಿಯು ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಈ ಸಮಸ್ಯೆಗೆ ಪರಿಷ್ಕಾರ ವಾರಕ್ಕೆ 2 ಬಾರಿ ಮೀನನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಮಧುಮೇಹದಿಂದ ಆಗುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಒಮೆಗಾ ಆಮ್ಲಗಳು ಕ್ರಿಯಶೀಲವಾಗಿ ವ್ಯವಹರಿಸುತ್ತವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಈ ಆಮ್ಲಗಳಿರುವ ಮೀನುಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯು ಚೆನ್ನಾಗಿ ಇರುತ್ತದೆ. ಆದರೆ ವಾರಕ್ಕೆ ಎರಡು ಬಾರಿ ತಿಂದರೆ… 500 ಮಿಲ್ಲಿ ಗ್ರಾಂ ಒಮೆಗಾ-3 ಗೆ ಸಮಾನವಂತೆ. ಲಂಡನ್ ನ ಡಾಕ್ಟರ್ ಗಳು 55 ರಿಂದ 80 ಮಧ್ಯ ವಯಸ್ಸಿನ 3,614 ಜನರು ಟೈಟಪ್-2 ಡಯಾಬಿಟಿಸ್ ರೋಗಿಗಳಿಗೆ ವಾರಕ್ಕೆ 500 ಮಿಲ್ಲಿ ಗ್ರಾಂ ಒಮೆಗಾ-3 ಆಮ್ಲವನ್ನು ಆಹಾರದಲ್ಲಿ ಒಂದು ಭಾಗವಾಗಿ ತೆಗೆದುಕೊಳ್ಳಬೇಕು ಕೊಟ್ಟಿದ್ದರು. ಇದರಿಂದ ಅವರಲ್ಲಿ ಡಯಾಬಿಟಿಸ್ ದುಷ್ಪರಿಣಾಮಗಳು ಶೇ.48 ರಷ್ಟು ಕಡಿಮೆಯಾಗಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

ಪ್ರಯಾಣದಲ್ಲಿ ವಾಂತಿ ಆಗಬಾರದೆಂದರೆ ಈ ಚಿಕ್ಕ ಸಲಹೆಗಳನ್ನು ಪಾಲಿಸಿ..


ಬಹಳಷ್ಟು ಮಂದಿಗೆ ಬಸ್ ಪ್ರಯಾಣ ಅಂದ್ರೆ ಆಗಲ್ಲ.. ಬಸ್ ನಲ್ಲಿ ಪ್ರಯಾಣಿಸುವಾಗ ವಾಂತಿ ಬರುವಂತಾಗುವುದು, ಹೊಟ್ಟೆ ತೊಳೆಸಿದ ಅನುಭವ ಆಗುತ್ತದೆ. ಇದರಿಂದ ವಾಂತಿಯೂ ಆಗುತ್ತದೆ. ಹೆಚ್ಚಾಗಿ ತಿರುಪತಿಯಂತಹ ಬೆಟ್ಟ ಹತ್ತುವಾಗ, ಶಿರಾಡಿ ಘಾಟ್ ನಂತಹ ರಸ್ತೆಗಳಲ್ಲಿ ಸಂಚರಿಸುವಾಗ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಈ ರೀತಿ ಬಹಳಷ್ಟು ಮಂದಿಗೆ ಪ್ರಯಾಣದಲ್ಲಿ ವಾಂತಿ ಆಗುತ್ತಿರುತ್ತದೆ. ಅಂತಹವರು ಪ್ರಯಾಣಕ್ಕೆ ಮುನ್ನ ಕೆಲವೊಂದು ಸೂಚನೆಗಳನ್ನು ಪಾಲಿಸಿದರೆ ಈ ಸಮಸ್ಯೆಯಿಂದ ಹೊರಬೀಳಬಹುದು…

  • ಸಣ್ಣ ಶುಂಠಿ ಚೂರನ್ನು ದವಡೆಯಲ್ಲಿಟ್ಟುಕೊಂಡರೆ ವಾಂತಿಯಾಗುವ ಅವಕಾಶ ಕಡಿಮೆಯಾಗುತ್ತದೆ. ಶುಂಠಿಯಲ್ಲಿನ ಕ್ಯಾಲ್ಸಿಯಂ, ಪಾಸ್ಪರಸ್, ಐರನ್, ಮೆಗ್ನಿಷಿಯಂ, ಕಾಪರ್, ಜಿಂಕ್ ನಂತಹವು ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು.
  • ಅಡಿಕೆ ಚೂರನ್ನು ಚಪ್ಪರಿಸಿದರು ಈ ಸಮಸ್ಯೆಯಿಂದ ಪಾರಾಗಬಹುದು.
  • ನಿಂಬೆಹಣ್ಣನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆಯನ್ನು ಆಘ್ರಾಣಿಸುತ್ತಿದ್ದರೂ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
  • ಲವಂಗ, ಸೋಂಪನ್ನು ದವಡೆಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರು ವಾಮಿಟಿಂಗ್ ಸೆನ್ಸೇಷನ್ ಕಡಿಮೆಯಾಗುತ್ತದೆ…
  • ಮುಖ್ಯವಾಗಿ ಬಸ್ ನಲ್ಲಾಗಲಿ, ಕಾರಿನಲ್ಲಾಗಲಿ ಪ್ರಯಾಣಿಸುವಾಗ ಮುಂದಿನ ಸೀಟ್ ನಲ್ಲಿ ಕುಳಿತು ನಮ್ಮ ದೃಷ್ಟಿಯನ್ನು ನೇರವಾಗಿ ನೋಡಿದರು ವಾಮಿಟಿಂಗ್ ಸೆನ್ಸೇಷನ್ ನಿಂದ ತಪ್ಪಿಸಿಕೊಳ್ಳಬಹುದು.

Saturday, 1 April 2017

हार्ट अटैक आने पर पास में कोई ना हो तो 10 सेकंड में खुद अपनी जिंदगी कैसे बचाये ?

अचानक से आपके सीने में तेज दर्द होता है जो आपके हाथों से होता हुआ आपके जबड़ो तक पहुँच जाता है । आप अपने घर से सबसे नजदीक अस्पताल से 5 मील दूर हैं और दुर्भाग्यवश आपको ये नहीं समझ मे आ रहा कि आप वहां तक पहुँच पाएंगे कि नहीं । आप सी पी आर (CPR : Cardio Pulmonary Resuscitation) में प्रशिक्षित हैं मगर वहां भी आपको ये नहीं सिखाया गया कि इसको खुद पर प्रयोग कैसे करें । ऐसे में दिल के दौरे से बचने के लिए ये उपाय आजमाए :- चूँकि ज्यादातर लोग दिल के दौरे के वक्त अकेले होते हैं l बिना किसी की मदद के उन्हें सांस लेने में तकलीफ होती है । वे बेहोश होने लगते हैं और उनके पास very hardly सिर्फ 10 सेकण्ड्स होते है । ऐसे हालत में पीड़ित जोर जोर से खांस कर खुद को सामान्य रख सकता है । एक जोर की खांसी लेनी चाहिए हर खांसी से पहले और खांसी इतनी तेज हो कि छाती से थूक निकले । जब तक मदद न आये ये प्रक्रिया दो सेकंड से दोहराई जाए ताकि धड्कन सामान्य हो जाए । जोर की साँसे फेफड़ो में ऑक्सीजन पैदा करती हैं और जोर की खांसी की वजह से दिल सिकुड़ता है जिससे रक्त संचालन नियमित रूप से चलता है । जहाँ तक हो सके इस सन्देश को हर एक तक पहुंचाए । एक ह्रदय के डॉक्टर ने तो यहाँ तक कहा कि अगर हर व्यक्ति यह सन्देश 10 लोगो को भेजे तो एक जान बचायी जा सकती है । आप सबसे निवेदन है कि चुटकले भेजने के बजाय यह सन्देश सबको भेजे ताकि लोगों की जान बच सके । अगर आपको यह सन्देश बार बार मिले तो परेशान होने के बजाय आपको खुश होना चाहिए कि आपको यह बताने वाले बहुत जन है कि दिल के दौरे से कैसे बचा जाये ।