ವಾರಕ್ಕೆ ಕನಿಷ್ಟ 2 ಬಾರಿ ಮೀನನ್ನು ತಿಂದರೆ ಏನಾಗಬಹುದು? ಲಂಡನ್ ವೈದ್ಯರು ಹೇಳಿದ ಆ ರಹಸ್ಯವನ್ನು ನೀವು ತಿಳಿದುಕೊಳ್ಳಲೇಬೇಕು. ಹೌದು… ಇಂದಿನ ಪ್ರಪಂಚದಲ್ಲಿ ಕಾಡುತ್ತಿರುವ ಕಾಯಿಲೆಗಳಲ್ಲಿ ಶುಗರ್ ಒಂದು. ಇಡೀ ಪ್ರಪಂಚದಲ್ಲಿ ಕೋಟ್ಯಾಂತರ ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ 2 ವಿಧಗಳಿವೆ. ಒಂದು ಟೈಪ್-1, ಇನ್ನೊಂದು ಟೈಪ್-2 . ಕ್ಲೋಮ ಗ್ರಂಥಿ ಕೆಲಸ ಮಾಡದಿದ್ದರೆ ಟೈಟಪ್-1, ಕೆಲಸ ಮಾಡುತ್ತಿರುವುದರಿಂದ ಬಿಡುಗಡೆಯಾಗುವ ಇನ್ಸುಲಿನ್ ಅನ್ನು ಶರೀರವು ಸರಿಯಾಗಿ ತೆಗೆದುಕೊಳ್ಳದಿದ್ದರೆ ಆಗ ಟೈಟಪ್ -2 ಮಧುಮೇಹ ಬರುತ್ತದೆ. ಆದರೆ ಯಾವುದು ಬಂದರೂ ಆಯಾ ವ್ಯಕ್ತಿಯ ಶರೀರದಲ್ಲಿ ಗ್ಲೂಕೋಸ್ ರಕ್ತದಲ್ಲಿರಬೇಕಾದ ಪ್ರಮಾಣಕ್ಕಿಂತಲೂ ಹೆಚ್ಚಾಗಿಯೇ ಇರುತ್ತದೆ. ಹೀಗೆ ಈ ಕಾಯಿಲೆ ಶರೀರದಲ್ಲಿ ಅನೇಕ ಭಾಗಗಳನ್ನು ಕೆಲಸ ಮಾಡದಂತೆ ಮಾಡುತ್ತದೆ. ಜೊತೆಗೆ ಇದು ಮಧುಮೇಹ ಔಷಧಿಗಳಿಗೆ ಗುಣ ವಾಗುವುದಿಲ್ಲ. ನಿಯಂತ್ರಣದಿಂದಲೇ ಇದನ್ನು ಕಡಿಮೆ ಮಾಡಬಹುದು. ಆದರೆ ಎಷ್ಟೋ ತರಹದ ಡಯಾಬಿಟಿಕ್ ಔಷಧಿಗಳು ಆಯಾ ವೈದ್ಯ ವಿಧಾನದಲ್ಲಿ ನಮಗೆ ಸಿಕ್ಕುತ್ತಿದ್ದರು ವಾರಕ್ಕೆ 2 ಬಾರಿ ಮೀನು ತಿಂದರೆ ಸಾಕು ಡಯಾಬಿಟಿಸ್ ಸಮಸ್ಯೆಗೆ ಗುಡ್ ಬೈ ಎನ್ನಬಹುದು. ಹೌದು ನೀವು ಕೇಳಿದ್ದು ನಿಜ..!
ಇದನ್ನು ಹೇಳಿದ್ದು ಯಾರೂ ಅಲ್ಲ ಸಾಕ್ಷಾತ್ ಲಂಡನ್ ವೈದ್ಯರು. ಮಧುಮೇಹ ಕಾರಣದಿಂದ ಅನೇಕ ಅನಾರೋಗ್ಯದ ಸಮಸ್ಯೆಗಳು ಬರುತ್ತವೆಂದು ಗೊತ್ತು. ರೋಗಗಳಲ್ಲದೆ ಕಣ್ಣಿನ ದೃಷ್ಟಿಯು ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಈ ಸಮಸ್ಯೆಗೆ ಪರಿಷ್ಕಾರ ವಾರಕ್ಕೆ 2 ಬಾರಿ ಮೀನನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಮಧುಮೇಹದಿಂದ ಆಗುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಒಮೆಗಾ ಆಮ್ಲಗಳು ಕ್ರಿಯಶೀಲವಾಗಿ ವ್ಯವಹರಿಸುತ್ತವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಈ ಆಮ್ಲಗಳಿರುವ ಮೀನುಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯು ಚೆನ್ನಾಗಿ ಇರುತ್ತದೆ. ಆದರೆ ವಾರಕ್ಕೆ ಎರಡು ಬಾರಿ ತಿಂದರೆ… 500 ಮಿಲ್ಲಿ ಗ್ರಾಂ ಒಮೆಗಾ-3 ಗೆ ಸಮಾನವಂತೆ. ಲಂಡನ್ ನ ಡಾಕ್ಟರ್ ಗಳು 55 ರಿಂದ 80 ಮಧ್ಯ ವಯಸ್ಸಿನ 3,614 ಜನರು ಟೈಟಪ್-2 ಡಯಾಬಿಟಿಸ್ ರೋಗಿಗಳಿಗೆ ವಾರಕ್ಕೆ 500 ಮಿಲ್ಲಿ ಗ್ರಾಂ ಒಮೆಗಾ-3 ಆಮ್ಲವನ್ನು ಆಹಾರದಲ್ಲಿ ಒಂದು ಭಾಗವಾಗಿ ತೆಗೆದುಕೊಳ್ಳಬೇಕು ಕೊಟ್ಟಿದ್ದರು. ಇದರಿಂದ ಅವರಲ್ಲಿ ಡಯಾಬಿಟಿಸ್ ದುಷ್ಪರಿಣಾಮಗಳು ಶೇ.48 ರಷ್ಟು ಕಡಿಮೆಯಾಗಿರುವುದು ಸಂಶೋಧನೆಯಿಂದ ತಿಳಿದು ಬಂದಿದೆ.

No comments:
Post a Comment